ವಿಷಯಕ್ಕೆ ಹೋಗಿ

ಮೌನ ಕ್ರಾಂತಿ


ಬಿಚ್ಚಿಕೊಳ್ಳಲಿ ಹೆಪ್ಪುಗಟ್ಟಿದ ದೇಶಾಭಿಮಾನದ ಅಲೆಗಳು - 

ಉಕ್ಕಿ ಬರಲಿ ನಾಡಿಗಾಗಿ ನೆತ್ತರಾ ಶುಭ ಸೆಲೆಗಳು - 

ಹರಿಸೋಣ ಬನ್ನಿ ಮೌನ ಕ್ರಾಂತಿಯ...


ರೋಷ ತುಂಬಿದ ಪಾಪಿ ಕಂಗಳ ದೋಷ ಕರಗಲಿ - 

ಮನ ಮನಗಳಲ್ಲಿ ಜಗವ ಗೆದ್ದ ಜ್ಞಾನ ಜಯಸಲಿ - 

ಬೆಳಗೋಣ ಬನ್ನಿ ಮೌನ ಕ್ರಾಂತಿಯ


ವ್ಯರ್ಥವಾದ ಚುಚ್ಚು ಮಾತಿನ ಚರ್ಚೆ ನಶಿಸಲಿ - 

ಕರುನಾಡ ನುಡಿ ಗುಡಿಗಳಲ್ಲಿ ಮಮತೆ ಮೆರೆಯಲಿ - 

ಹಂಚೋಣ ಬನ್ನಿ ಮೌನ ಕ್ರಾಂತಿಯ.


ನಾಸ್ತಿಕನೂ ನಿಜ ನಂಬುವಂತೆ ದೈವದ ಆಸ್ತಿ ಬೆಳೆಯಲಿ - 

ಮಸ್ತಕದ ಪುಟಪುಟಗಳಲ್ಲಿ ಮಾನವಿಯ ಗ್ರಂಥ ಹುಟ್ಟಲಿ - 

ಕಲಿಸೋಣ ಬನ್ನಿ ಮೌನ ಕ್ರಾಂತಿಯ ...


ಯುವ ಜನತೆಯ ಹೆಗಲ ಮೇಲೆ ಭಾರತಾಂಬೆಯ ಕೈಗಳಿರಲಿ - 

ಸಾಧಿಸಿ ಏರುವ ಎತ್ತರದುದ್ದಕೂ ಭರತ ಖಂಡದ ಹೆಮ್ಮೆ ಕಾಣಲಿ - 

ಸಾಧಿಸೋಣ ಬನ್ನಿ ಮೌನ ಕ್ರಾಂತಿಯ...


 ರಾಘವೇಂದ್ರ ಗೌಡ, ಹೊನ್ನಾವರ 

ಸ. ಹಿ. ಪ್ರಾ. ಶಾಲೆ ಮಳಲಗಾಂವ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕವನ: ಗಣಿತದ ಗಮ್ಮತ್ತು

 ಗಣಿತ ಗಮ್ಮತ್ತಿನ ಗಣಿ    ಮೌಲ್ಯಯುತ ಮಾಣಿಕ್ಯದ ಮಣಿ ll

ಮಮತೆಯ ಮಡಿಲು: ಕವಿ ಸಾಹಿತಿಗಳ ಜೀವಾಳ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕಥೆ

ದಟ್ಟವಾದ ಕಾಡೊಂದರಲ್ಲಿ ಹುಲಿ, ಸಿಂಹ, ಚಿರತೆ, ಆನೆ, ಕೋತಿ, ಕರಡಿ ಹೀಗೆ ಹಲವಾರು ಪ್ರಾಣಿಗಳು ನೆಮ್ಮದಿಯಿಂದ ವಾಸವಾಗಿದ್ದವು. ಅಲ್ಲಿಯೇ ಸಮೀಪದಲ್ಲಿ ಒಂದು ನದಿ ಹರಿಯುತ್ತಿತ್ತು. ಆ ಕಾಡಿನ ಎಲ್ಲಾ ಪ್ರಾಣಿಗಳು ಆ ನದಿಯ ನೀರನ್ನು ಕುಡಿದು ತಮ್ಮ ಬಾಯಾರಿಕೆಯನ್ನು ನೀಗಿಸಿಕೊಳ್ಳುತ್ತಿದ್ದವು.

Follow us