ವಿಷಯಕ್ಕೆ ಹೋಗಿ

ವಸುಂಧರಾ


ನೀ ಜನ್ಮತಳೆದೆ ಆ ತಾಯಿ ಮಡಿಲಲ್ಲಿ

ದೈವ ಮಾತೆ ಎಂದೆ ಉಸಿರಿನ ಕೊನೆ ತನಕ

ಜೀವ ಜೀವಕೂ ಆಸರೆ ಈ ಭೂಮಿ ತಾಯಿ

ಭೂಮಾತೆಯ ಮರೆತೇ ನೀನು ಓ ಮನುಜ ||1


ನಲಿ -ಕಲಿದೆ ಜೊತೆಗೆ ಜನನಿ ಆರೈಕೆಯಲಿ

ಗುರುವೆಂದು ಪೂಜೆ ಗೈದಿಹೆ ಈ ದೇವತೆಯನ್ನು 

ನಂದದಾ ವನ ಇಹುದು ಈ ಹಸಿರು ನಂದನವು

ಭೂದೇವಿ ಹಸಿರು ತೊರೆದೆ ನೀನು ಓ ಮನುಜ||2


ಆನಂದದಿ ನೀ ನಿಂತೆ ಅಮ್ಮನಾ ತೋಳಲ್ಲಿ

ಅನುದಿನವು ಕಂಡೆ ಪರಿ ಪರಿಯ ಸೊಬಗು

ವಸುಧೆಯಲಿ ಇತ್ತು ರನ್ನದಾ ಐಸಿರಿಯು 

ಭೂಸಿರಿಯ ನುಂಗಿದೆ ನೀನು ಓ ಮನುಜ ||3


ಬದುಕಿನ ಆಸೆ ಅಂಗಳದಿ ಭೂ - ತಾಯಿ ಋಣವ

ಕಡೆಗಣಿಸಿ ಮೆರೆದೆ ಈ ಲೋಕದ ಪಯಣದಲಿ 

ಒಳಿತನ್ನೆ ಕಾಣದಾ ಬರಡು ಹುಲು ಮಾನವನಾಗಿ

ಬದುಕಿನ ಕರ್ತವ್ಯವಾ ಮರೆತೆ ನೀನು ಓ ಮನುಜ ||4


✍️💐 ಶ್ರೀಕಾರ 

ಶಿಕ್ಷಕರು, ಸ್ನೇಹಸಾಗರ ವಸತಿ ಶಾಲೆ, ಯಲ್ಲಾಪುರ

ಶಿರಸಿ ಶೈ. ಜಿಲ್ಲೆ ಉ.ಕ.

ಕಾಮೆಂಟ್‌ಗಳು

Follow us