ವಿಷಯಕ್ಕೆ ಹೋಗಿ

ಕವನ: ಗಣಿತದ ಗಮ್ಮತ್ತು

 ಗಣಿತ ಗಮ್ಮತ್ತಿನ ಗಣಿ  

 ಮೌಲ್ಯಯುತ ಮಾಣಿಕ್ಯದ ಮಣಿ ll


 ಅಪರಿಮಿತ ಸಂಖ್ಯೆಗಳ 

ಜೊತೆ ಆಟ 

ಮನವರಿಕೆ ಆದೀತು ಚೆನ್ನಾಗಿ ಪಾಠ l

ಗಣಿತ ಗಮ್ಮತ್ತಿನ ಗಣಿ 

ಮೌಲ್ಯಯುತ ಮಾಣಿಕ್ಯದ ಮಣಿ ll


 ಬೀಜಾಕ್ಷರ ಸೂತ್ರಗಳ ಮಂತ್ರ 

BODMASಗಳ ತಂತ್ರ 

ಪಠಿಸು ನೀ ಸದಾ,

 ಪ್ರಯತ್ನಗಳದ್ದು ಇದೆ,ಅದ್ಭುತ ಪಾತ್ರ l

ಗಣಿತ ಗಮ್ಮತ್ತಿನ ಗಣಿ ಮೌಲ್ಯಯುತ

 ಮಾಣಿಕ್ಯದ ಮಣಿ ll


 ನಿತ್ಯದ ಜೀವನಕ್ಕೆ ಬುನಾದಿ 

 ಗಣಿತ,ಬೇವು ಬೆಲ್ಲಗಳ ಮಿಶ್ರಿತ

 ಸಿಹಿ ಯುಗಾದಿ l

ಗಣಿತ ಗಮ್ಮತ್ತಿನ ಗಣಿ ಮೌಲ್ಯಯುತ

 ಮಾಣಿಕ್ಯದ ಮಣಿ ll


 ಗಣಿತಜ್ಞರ ಕೊಡುಗೆ ಅಪಾರ

 ತಿಳಿ ನೀ ಅದುವೇ ವಿಶಿಷ್ಟ ವಿಚಾರ l

ಗಣಿತ ಗಮ್ಮತ್ತಿನ ಗಣಿ ಮೌಲ್ಯಯುತ

 ಮಾಣಿಕ್ಯದ ಮಣಿ ll


 ಮೂಲಕ್ರಿಯೆಗಳೇ ಗಣಿತದ ವ್ಯಾಕರಣ 

ತಾರ್ಕಿಕ ಆಲೋಚನೆಯೇ ಇದರ ಹೂರಣl

 ಗಣಿತ ಗಮ್ಮತ್ತಿನ ಗಣಿ ಮೌಲ್ಯಯುತ 

ಮಾಣಿಕ್ಯದ ಮಣಿ ll


ಗಣಿತ ಕಬ್ಬಿಣದ ಕಡಲೆ ಅಲ್ಲ 

 ಕಬ್ಬಿನ ಗಾಣದಲ್ಲಿನ ಸಿಹಿ ಬೆಲ್ಲ 

 ಬಿಡು ನೀ ಭ್ರಮೆಯ 

ಬಿಡಿಸು ಬಾ ಸಮಸ್ಯೆಗಳ ಜೊತೆಗೆ 

 ಸುಂದರ ಪ್ರಮೇಯ l

 ಗಣಿತ ಗಮ್ಮತ್ತಿನ ಗಣಿ 

ಮೌಲ್ಯಯುತ ಮಾಣಿಕ್ಯದ ಮಣಿ ll



ಪರಿಕಲ್ಪನೆಗಳ ಅರಿತರೆ ನೀನೇ 

ಸಾಮ್ರಾಟ, ಹೌದು..,

 ಪರೀಕ್ಷಾ ಯುದ್ಧ ಗೆಲ್ಲುವುದು  

ಖಂಡಿತ ದಿಟl 

ಗಣಿತವೇ ಅನನ್ಯ ಸದಾ ಮಾನ್ಯ l

 ಗಣಿತ ಗಮ್ಮತ್ತಿನ ಗಣಿ ಮೌಲ್ಯಯುತ

 ಮಾಣಿಕ್ಯದ ಮಣಿ ll

ಅದಕೆ ನಾ ಸದಾ ಚಿರಋಣಿ l






✍️ ಶ್ರೀ ರವಿಕುಮಾರ ಕೆ ಎನ್

 ಸಹಶಿಕ್ಷಕರು (PCM)

ಸರ್ಕಾರಿ ಪ್ರೌಢಶಾಲೆ ಬಿಸಗೋಡ  ತಾll ಯಲ್ಲಾಪುರ 

ಶೈ.ಜಿ ಶಿರಸಿ (ಉ. ಕ )


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಮತೆಯ ಮಡಿಲು: ಕವಿ ಸಾಹಿತಿಗಳ ಜೀವಾಳ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕಥೆ

ದಟ್ಟವಾದ ಕಾಡೊಂದರಲ್ಲಿ ಹುಲಿ, ಸಿಂಹ, ಚಿರತೆ, ಆನೆ, ಕೋತಿ, ಕರಡಿ ಹೀಗೆ ಹಲವಾರು ಪ್ರಾಣಿಗಳು ನೆಮ್ಮದಿಯಿಂದ ವಾಸವಾಗಿದ್ದವು. ಅಲ್ಲಿಯೇ ಸಮೀಪದಲ್ಲಿ ಒಂದು ನದಿ ಹರಿಯುತ್ತಿತ್ತು. ಆ ಕಾಡಿನ ಎಲ್ಲಾ ಪ್ರಾಣಿಗಳು ಆ ನದಿಯ ನೀರನ್ನು ಕುಡಿದು ತಮ್ಮ ಬಾಯಾರಿಕೆಯನ್ನು ನೀಗಿಸಿಕೊಳ್ಳುತ್ತಿದ್ದವು.

ಮೌನ ಕ್ರಾಂತಿ

ಬಿಚ್ಚಿಕೊಳ್ಳಲಿ ಹೆಪ್ಪುಗಟ್ಟಿದ ದೇಶಾಭಿಮಾನದ ಅಲೆಗಳು -  ಉಕ್ಕಿ ಬರಲಿ ನಾಡಿಗಾಗಿ ನೆತ್ತರಾ ಶುಭ ಸೆಲೆಗಳು -  ಹರಿಸೋಣ ಬನ್ನಿ ಮೌನ ಕ್ರಾಂತಿಯ...

Follow us