ವಿಷಯಕ್ಕೆ ಹೋಗಿ

ಯೋಧ



ಯೋಧನ ಎದೆ ಗೂಡಿನಲ್ಲಿ 

ಸಾವಿರಾರು ನೋವುಗಳಿದ್ದರೂ

ನಮ್ಮೆಲ್ಲರ ಬದುಕಿಗಾಗಿ

ಸದಾ ಮಿಡಿಯುವ ಹೃದಯವೇ ಯೋಧ..


 ಬಲಾಗದವರೊಡನೆ ಒಡನಾಟವ ಮರೆತು

ಮಡದಿ ಮಕ್ಕಳನ್ನು ಅಗಲಿ ನಿಂತು

ತಂದೆ ತಾಯಿಗಳ ಹೆಮ್ಮೆಯ ಉಸಿರಾಗಿ,

ದೇಶ ಕಾಯುವ ಧೀರ ಯೋಧ.....


ಹೆತ್ತವರಿಗೆ ಕೂಳು ಹಾಕದ ಮಕ್ಕಳು,

ದುಡ್ಡಿಗಾಗಿಯೇ ಹೊಂಚು ಹಾಕುವ ಹಪಾಪಿಗಳಿಂದ;

ಕೆಸರಾಗಿರುವ ಸಮಾಜದ ಗಡಿಯೆಲ್ಲಿ

ಅರಳಿ ನಿಂತ ಕಮಲವೇ ಯೋಧ.....


 ಗಡಿಯಲ್ಲಿ ನಿಲ್ಲುವ ಯೋಧರಾಗದಿದ್ದರೂ

ಮನದ ಗುಡಿಯಲ್ಲಿ ಯೋಧರಂತಿರೋಣ ....


   ರಚನೆ: 

ಸೀತಾ. ಕೆ (ಸಹಶಿಕ್ಷಕಿ)

ಸ. ಕಿ. ಪ್ರಾ.ಶಾಲೆ.ಸವಣೆ

ತಾ: ಯಲ್ಲಾಪುರ ಶೈ.ಜಿ, ಶಿರಸಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕವನ: ಗಣಿತದ ಗಮ್ಮತ್ತು

 ಗಣಿತ ಗಮ್ಮತ್ತಿನ ಗಣಿ    ಮೌಲ್ಯಯುತ ಮಾಣಿಕ್ಯದ ಮಣಿ ll

ಮಮತೆಯ ಮಡಿಲು: ಕವಿ ಸಾಹಿತಿಗಳ ಜೀವಾಳ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕಥೆ

ದಟ್ಟವಾದ ಕಾಡೊಂದರಲ್ಲಿ ಹುಲಿ, ಸಿಂಹ, ಚಿರತೆ, ಆನೆ, ಕೋತಿ, ಕರಡಿ ಹೀಗೆ ಹಲವಾರು ಪ್ರಾಣಿಗಳು ನೆಮ್ಮದಿಯಿಂದ ವಾಸವಾಗಿದ್ದವು. ಅಲ್ಲಿಯೇ ಸಮೀಪದಲ್ಲಿ ಒಂದು ನದಿ ಹರಿಯುತ್ತಿತ್ತು. ಆ ಕಾಡಿನ ಎಲ್ಲಾ ಪ್ರಾಣಿಗಳು ಆ ನದಿಯ ನೀರನ್ನು ಕುಡಿದು ತಮ್ಮ ಬಾಯಾರಿಕೆಯನ್ನು ನೀಗಿಸಿಕೊಳ್ಳುತ್ತಿದ್ದವು.

ಮೌನ ಕ್ರಾಂತಿ

ಬಿಚ್ಚಿಕೊಳ್ಳಲಿ ಹೆಪ್ಪುಗಟ್ಟಿದ ದೇಶಾಭಿಮಾನದ ಅಲೆಗಳು -  ಉಕ್ಕಿ ಬರಲಿ ನಾಡಿಗಾಗಿ ನೆತ್ತರಾ ಶುಭ ಸೆಲೆಗಳು -  ಹರಿಸೋಣ ಬನ್ನಿ ಮೌನ ಕ್ರಾಂತಿಯ...

Follow us