ವಿಷಯಕ್ಕೆ ಹೋಗಿ

ಕಾರ್ಗಿಲ್ ವಿಜಯ


ತಲೆ ಬಾಗಿ ನಮಿಪೆ

ಓ ಧೀರ ರಣ ಯೋಧ 

ದೇಶ ಕಾಯ್ವ ಧೀಮಂತ

ಓ ದೇವ ಮಾನವ ||1


ತಲೆ ಬಾಗಿ ನಮಿಪೆ

ಓ ಧೀರ ರಣ ಯೋಧ 

ಭಾರತಾಂಬೆ ದುರ್ಗೆಗೆ 

ಅರ್ಪಣೆಯ ಅರ್ಚಕ 

ಸಕಲರಿಗೂ ನಿಲುಕದಾ..

ಸರ್ವ ಜೀವ ರಕ್ಷಕ  ||2


ತಲೆ ಬಾಗಿ ನಮಿಪೆ

ಓ ಧೀರ ರಣ ಯೋಧ 

ತಾಯಿ, ಜನ್ಮಭೂಮಿಗೆ

ಕರುಳ ಕುಡಿಯ ರನ್ನ

ತನು ಮನ ತ್ಯಾಗಕೆ 

ನೀನೇ ಅಮರ ಭಕ್ತ ||3


ತಲೆ ಬಾಗಿ ನಮಿಪೆ

ಓ ಧೀರ ರಣ ಯೋಧ 

ಹೆತ್ತ ತಾಯಿ ದೇವಿಗೆ 

ಕುಂಕುಮದ ಅರ್ಪಣೆ

ಭಾರತಾಂಬೆ ಪಾದಕ್ಕೆ

ರಕ್ತ, ಕಾಯ ಸಿಂಚನೆ  ||4


ತಲೆ ಬಾಗಿ ನಮಿಪೆ

ಓ ಧೀರ ರಣ ಯೋಧ 

ಆ ಕಾರ್ಗೀಲ್ ಪಣವು

ಶೂರತೆಯ ಝೇಂಕಾರ

ಕಂಡು ನೀ ಮುನ್ನಡೆದೆ

ನವ ಶಕ್ತಿಯ ಉದಯ ||5


ತಲೆ ಬಾಗಿ ನಮಿಪೆ

ಓ ಧೀರ ರಣ ಯೋಧ 

ಶತ್ರು ನಾಶ ತರ್ಪಣ

ಹಿಮ ಗಿರಿಯ ತುಂಗದಿ

ತಳ ಊರಿ ಜಯವೆಂದೆ

ತ್ರಿವರ್ಣ ಧ್ವಜ ಸ್ತಂಭಕೆ ||6


ತಲೆ ಬಾಗಿ ನಮಿಪೆ

ಓ ಧೀರ ರಣ ಯೋಧ 

ನಾಯಕ ನಿನ್ನ ಜನ್ಮವು

ಅಮರತ್ವದ ಕಡೆಗೆ

ನಿನಗಿದೋ ಸಮ್ಮಾನ 

ಜಯ ಶ್ರೀಕಾರ ವಂದನೆ  || 7

ತಲೆ ಬಾಗಿ ನಮಿಪೆ

ಓ ಧೀರ ರಣ ಯೋಧ ||

ದೇಶ ಕಾಯ್ವ ಧೀಮಂತ

ಓ ದೇವ ಮಾನವ  ||




✍️ ಶ್ರೀಕಾರ 

ಶಿಕ್ಷಕರು ಸ್ನೇಹ ಸಾಗರ ವಸತಿ ಶಾಲೆ ಇಡಗುಂದಿ

ಯಲ್ಲಾಪುರ ಶಿರಸಿ ಶೈಕ್ಷಣಿಕ ಜಿಲ್ಲೆ ಉ.ಕ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕವನ: ಗಣಿತದ ಗಮ್ಮತ್ತು

 ಗಣಿತ ಗಮ್ಮತ್ತಿನ ಗಣಿ    ಮೌಲ್ಯಯುತ ಮಾಣಿಕ್ಯದ ಮಣಿ ll

ಮಮತೆಯ ಮಡಿಲು: ಕವಿ ಸಾಹಿತಿಗಳ ಜೀವಾಳ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕಥೆ

ದಟ್ಟವಾದ ಕಾಡೊಂದರಲ್ಲಿ ಹುಲಿ, ಸಿಂಹ, ಚಿರತೆ, ಆನೆ, ಕೋತಿ, ಕರಡಿ ಹೀಗೆ ಹಲವಾರು ಪ್ರಾಣಿಗಳು ನೆಮ್ಮದಿಯಿಂದ ವಾಸವಾಗಿದ್ದವು. ಅಲ್ಲಿಯೇ ಸಮೀಪದಲ್ಲಿ ಒಂದು ನದಿ ಹರಿಯುತ್ತಿತ್ತು. ಆ ಕಾಡಿನ ಎಲ್ಲಾ ಪ್ರಾಣಿಗಳು ಆ ನದಿಯ ನೀರನ್ನು ಕುಡಿದು ತಮ್ಮ ಬಾಯಾರಿಕೆಯನ್ನು ನೀಗಿಸಿಕೊಳ್ಳುತ್ತಿದ್ದವು.

ಮೌನ ಕ್ರಾಂತಿ

ಬಿಚ್ಚಿಕೊಳ್ಳಲಿ ಹೆಪ್ಪುಗಟ್ಟಿದ ದೇಶಾಭಿಮಾನದ ಅಲೆಗಳು -  ಉಕ್ಕಿ ಬರಲಿ ನಾಡಿಗಾಗಿ ನೆತ್ತರಾ ಶುಭ ಸೆಲೆಗಳು -  ಹರಿಸೋಣ ಬನ್ನಿ ಮೌನ ಕ್ರಾಂತಿಯ...

Follow us