ಅಯ್ಯೋ! ಗುಡ್ಡ ಕುಸಿದೇ ಬಿತ್ತು
ಏನ್ರಪ್ಪಾ ಪರಿಹಾರ ?
ಬೆಟ್ಟ ಕೊರೆಯೋದ ಬಿಟ್ರೆ ಸಾಕು
ಉಳಿಸಿರಿ ಪ್ರಕೃತಿ ಪರಿವಾರ
ಮಳೆ ಸ್ವಲ್ಪ ಜಾಸ್ತಿ ಆದ್ರೂ
ನೆರೆ ಬರೋದ್ಯಾಕೆ ?
ಎಲ್ಲೋ.. ಏನೋ ತಪ್ಪು
ಆಗಿರ್ಬೋದು ಜೋಕೆ
ಬೇಸಿಗೆ ಬಂದ್ರೆ ನೀರೇ ಇಲ್ಲ
ಇದ್ಯಾವ ಕಾಲ ಬಂತಪ್ಪ !
ಮಳೆ ನೀರನು ಇಂಗಿಸಲಿಲ್ಲ
ತಪ್ಪು ನಮ್ದೇ ಕಣ್ರಪ್ಪ
ಏನ್ ಬಿಸಿಲು ಏನ್ ಸೆಕೆ
ಯಾಕೆ ಹೀಂಗೆಲ್ಲ ಆಗ್ತಿದೆ ?
ಗಿಡ ನೆಡಿ ಮರ ಉಳ್ಸಿ
ಎಲ್ಲಾ ಸರಿ ಹೋಗ್ತದೆ
ಪ್ಲಾಸ್ಟಿಕ್ ಕಸಗಳ ಕಡಿಮೆ
ಮಾಡ್ಬೇಕಿತ್ತು ಹೇಗೆ ?
'ಬಳಕೆ ಕಡಿಮೆ ಮಾಡ್ರಪ್ಪಾ'
ಕೂಗ್ತು ಮರದಿಂದ ಕಾಗೆ
ರೇಖಾ ಭಟ್
ಸಹಶಿಕ್ಷಕಿ
ಸ ಹಿ ಪ್ರಾ ಶಾಲೆ ಕಾನಗೋಡ


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ