ವಿಷಯಕ್ಕೆ ಹೋಗಿ

ಕನ್ನಡ ಕಸ್ತೂರಿಯ ಪರಿಮಳವು

ಮೋಡಗಳಾಚೆ ನೀಲಿಯ ರಂಗು

ತೆಪ್ಪದ ರಥವೇರಿ ಹೊಂಟ ಗುಂಗು

ಹಾಲ್ನೋರೆಯ ಧಾರೆಯಲಿ ಮಿಂದು

ಮೈತಳೆದ ಮುಗಿಲಿನ ಮಂಜು


ಎತ್ತಸಾಗಿದರೂ ಚಿತ್ತನಲಿಯುವುದು

ತಾರೆಗಳ ಸಂಭ್ರಮದಲ್ಲ

ಮೌನದ ಮೆರವಣಿಗೆ ಸಾಗಿಹುದು

ನೇಸರನ ಹೊಂಗಿರಣದ ಛಾಯೆಯಲ್ಲಿ


ನಾನು ತಾನೆಂಬ ಮೋಹ ಕಳಚುತ

ಇಹ-ಪರಲೋಕದ ಗಣನೆಗೆ

ಮೌನದ ಕವಚ ತೊಡಿಸುತ

ಸದ್ದಿಲ್ಲದೆ ಸಾಗುವ ಉಸಿರಿನಂತೆ


ಎಲ್ಲೋ ಹುಡುಕುವ ಸಂಭ್ರಮಕ್ಕಿಂತ

ಕಣ್ಣರಳಿಸಿ ಕಂಡಷ್ಟು ಸೌಖ್ಯವಿದೆ

ಮತ್ತಾವ ಭಾಷೆಯ ಗೊಂದಲಕ್ಕಿಂತ

ಅಚ್ಚ ಕನ್ನಡದ ತೊದಲು‌ ನುಡಿಬೇಕಿದೆ


ಅಬ್ಬರಿಸುವ ಪರಭಾಷೆಯ ಪಟಾಕಿಗಳು

ನಿದ್ದೆಗೆಡಿಸಿ,ಬಂಧಿಸಿ ನಸುನಕ್ಕಿವೆ

ಕನ್ನಡ ಕಸ್ತೂರಿಯ ಪರಿಮಳವು

ಮೌನದಂಚಿಗೆ ಜಾರದಂತೆ…






ಕವಿಯತ್ರಿ:

ಶಿವಲೀಲಾ ಹುಣಸಗಿ ಕವಯಿತ್ರಿ 

ಯಲ್ಲಾಪುರ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕವನ: ಗಣಿತದ ಗಮ್ಮತ್ತು

 ಗಣಿತ ಗಮ್ಮತ್ತಿನ ಗಣಿ    ಮೌಲ್ಯಯುತ ಮಾಣಿಕ್ಯದ ಮಣಿ ll

ಮಮತೆಯ ಮಡಿಲು: ಕವಿ ಸಾಹಿತಿಗಳ ಜೀವಾಳ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕಥೆ

ದಟ್ಟವಾದ ಕಾಡೊಂದರಲ್ಲಿ ಹುಲಿ, ಸಿಂಹ, ಚಿರತೆ, ಆನೆ, ಕೋತಿ, ಕರಡಿ ಹೀಗೆ ಹಲವಾರು ಪ್ರಾಣಿಗಳು ನೆಮ್ಮದಿಯಿಂದ ವಾಸವಾಗಿದ್ದವು. ಅಲ್ಲಿಯೇ ಸಮೀಪದಲ್ಲಿ ಒಂದು ನದಿ ಹರಿಯುತ್ತಿತ್ತು. ಆ ಕಾಡಿನ ಎಲ್ಲಾ ಪ್ರಾಣಿಗಳು ಆ ನದಿಯ ನೀರನ್ನು ಕುಡಿದು ತಮ್ಮ ಬಾಯಾರಿಕೆಯನ್ನು ನೀಗಿಸಿಕೊಳ್ಳುತ್ತಿದ್ದವು.

ಮೌನ ಕ್ರಾಂತಿ

ಬಿಚ್ಚಿಕೊಳ್ಳಲಿ ಹೆಪ್ಪುಗಟ್ಟಿದ ದೇಶಾಭಿಮಾನದ ಅಲೆಗಳು -  ಉಕ್ಕಿ ಬರಲಿ ನಾಡಿಗಾಗಿ ನೆತ್ತರಾ ಶುಭ ಸೆಲೆಗಳು -  ಹರಿಸೋಣ ಬನ್ನಿ ಮೌನ ಕ್ರಾಂತಿಯ...

Follow us