ವಿಷಯಕ್ಕೆ ಹೋಗಿ

ಅಮ್ಮ….


ದೇವರು ಎಂಬುದು ಕೇವಲ ನಂಬಿಕೆಯೆಂದರು….

ಸಾಕ್ಷಿಯೇ ನೀನಿರುವಾಗ ಕೇವಲ ನಂಬಿಕೆ ಮಾತ್ರ ಹೇಗಾದೀತು ಅಮ್ಮಾ…?           


ಸ್ವಾರ್ಥ ಪ್ರೀತಿಯೇ ತುಂಬಿದ ಜಗದಲ್ಲಿ  ನೀ  ಮಾತ್ರ ಬೇರೆಯಾದೆಯಲ್ಲ..

ಸುಳ್ಳಿನ ಪ್ರಪಂಚಕ್ಕೆ ನೀ ಮಾತ್ರ ಸತ್ಯವಾದೆಯಲ್ಲ…


ನಿನ್ನ ಪ್ರಪಂಚದಲ್ಲಿ ನಿನ್ನನ್ನೇ ಮರೆಯಾಗಿಸಿ

ನಿನ್ನವರಿಗಾಗಿ ಸವೆಸಿದೆಯಲ್ಲ…..

ಬಿಳಿ ಹಾಳೆಯಂಥ ಬದುಕಿನಲ್ಲಿ ಬಣ್ಣಗಳಿಂದ

ಸಿಂಗರಿಸಿ ಚಿತ್ತಾರ ಮಾಡಿದೆಯಲ್ಲ….

         

ಎಷ್ಟು ಗೋಗರೆದರೂ ಬರದ ದೇವರಿರುವಾಗ

ಕರೆಯದೇ ಓಡೋಡಿ ಬರುವ ನೀನು….

ನೀ ದೇವರಲ್ಲದೇ ಮತ್ತಿನ್ನೇನು ಅಮ್ಮಾ….?


ರೇಖಾ ಶೇಖರ ನಾಯ್ಕ

ಸಹಶಿಕ್ಷಕರು

ಸ. ಹಿ. ಪ್ರಾ.ಶಾಲೆ ತೊಳಗೋಡ್ 

ಯಲ್ಲಾಪುರ,ಶಿರಸಿ ಶೈ.ಜಿಲ್ಲೆ

●9535699974

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕವನ: ಗಣಿತದ ಗಮ್ಮತ್ತು

 ಗಣಿತ ಗಮ್ಮತ್ತಿನ ಗಣಿ    ಮೌಲ್ಯಯುತ ಮಾಣಿಕ್ಯದ ಮಣಿ ll

ಮಮತೆಯ ಮಡಿಲು: ಕವಿ ಸಾಹಿತಿಗಳ ಜೀವಾಳ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕಥೆ

ದಟ್ಟವಾದ ಕಾಡೊಂದರಲ್ಲಿ ಹುಲಿ, ಸಿಂಹ, ಚಿರತೆ, ಆನೆ, ಕೋತಿ, ಕರಡಿ ಹೀಗೆ ಹಲವಾರು ಪ್ರಾಣಿಗಳು ನೆಮ್ಮದಿಯಿಂದ ವಾಸವಾಗಿದ್ದವು. ಅಲ್ಲಿಯೇ ಸಮೀಪದಲ್ಲಿ ಒಂದು ನದಿ ಹರಿಯುತ್ತಿತ್ತು. ಆ ಕಾಡಿನ ಎಲ್ಲಾ ಪ್ರಾಣಿಗಳು ಆ ನದಿಯ ನೀರನ್ನು ಕುಡಿದು ತಮ್ಮ ಬಾಯಾರಿಕೆಯನ್ನು ನೀಗಿಸಿಕೊಳ್ಳುತ್ತಿದ್ದವು.

ಮೌನ ಕ್ರಾಂತಿ

ಬಿಚ್ಚಿಕೊಳ್ಳಲಿ ಹೆಪ್ಪುಗಟ್ಟಿದ ದೇಶಾಭಿಮಾನದ ಅಲೆಗಳು -  ಉಕ್ಕಿ ಬರಲಿ ನಾಡಿಗಾಗಿ ನೆತ್ತರಾ ಶುಭ ಸೆಲೆಗಳು -  ಹರಿಸೋಣ ಬನ್ನಿ ಮೌನ ಕ್ರಾಂತಿಯ...

Follow us